ಅಬುಧಾಬಿ : ಮಂಗಳೂರು ಕಪ್ ನ ತೃತೀಯ ಋತುವಿನ ಕ್ರಿಕೆಟ್ ಪಂದ್ಯಾಟ ನಿರೀಕ್ಷೆಯಂತೆ ಪೈಪೋಟಿಯುತವಾಗಿ ನಡೆಯಿತು. ಅನಿವಾಸಿ ಕನ್ನಡಿಗರ ಕ್ರೀಡಾ ಪ್ರೇಮಕ್ಕೆ ಇಂಬು ನೀಡುವಂತೆ ಅರಬ್ ಸಂಯುಕ್ತ ಸಂಸ್ಥಾನದ ಏಳು ಎಮಿರೈಟ್ಗಳಿಂದ ಆಗಮಿಸಿದ ಬರೋಬ್ಬರಿ 20 ಕ್ರಿಕೆಟ್ ತಂಡಗಳು ಜಿದ್ದಾ ಜಿದ್ದಿನ ಹೋರಾಟದ ಮೂಲಕ ಕದನ ಕುತೂಹಲ ಕೆರಳಿಸಿತ್ತು.