ಮೊದಲ ಟಿ20 ಪಂದ್ಯದ ಗೆಲುವಿನ ಉತ್ಸಾಹದಲ್ಲಿರುವ ಭಾರತ ಕ್ರಿಕೆಟ್ ತಂಡವು, ಇಂದು ಇಂಧೋರ್ನಲ್ಲಿ ಪ್ರವಾಸಿ ಶ್ರೀಲಂಕಾ ತಂಡದೊಂದಿಗೆ ಎರಡನೆಯ ಟಿ20 ಪಂದ್ಯ ಆಡಲು ಸಜ್ಜಾಗಿದ್ದು, ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಇರಾದೆ ಹೊಂದಿದೆ. ಪ್ರವಾಸಿ ಶ್ರೀಲಂಕಾ ವಿರುದ್ಧ ಆಡಿದ ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ಗೆದ್ದಿರುವ ಭಾರತ ತಂಡ, ಇಂದಿನ ಪಂದ್ಯದಲ್ಲಿ ಲಂಕಾವನ್ನು ಬಗ್ಗು ಬಡಿಯುವ ಮೂಲಕ ಮೂರು ಸರಣಿಗಳನ್ನು ಕೈವಶ ಮಾಡಿಕೊಳ್ಳುವ ಭರವಸೆ ಹೊಂದಿದೆ.