ಸತತ ಶತಕ ಸಿಡಿಸಿ ಮಯಾಂಕ್ ಅಗರ್ವಾಲ್ ಹೊಸ ದಾಖಲೆ

ಪುಣೆ| Krishnaveni K| Last Modified ಶುಕ್ರವಾರ, 11 ಅಕ್ಟೋಬರ್ 2019 (09:46 IST)
ಪುಣೆ: ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿದ್ದು ಹೊಸ ದಾಖಲೆಯಾಗಿದೆ.

 
ಮೊದಲ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಮಯಾಂಕ್ ದ್ವಿತೀಯ ಪಂದ್ಯದಲ್ಲೂ ಶತಕ ಸಿಡಿಸಿದ್ದಾರೆ. ಇದು ಟೀಂ ಇಂಡಿಯಾ ಆರಂಭಿಕರೊಬ್ಬರು ಮಾಡಿದ ದಾಖಲೆಯಾಗಿದೆ.
 
ಆರಂಭಿಕರಾಗಿ ಯಾವುದೇ ತಂಡದ ಸತತ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್ ಮನ್ ಮತ್ತು ದ.ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ದಾಖಲೆ ಮಯಾಂಕ್ ಪಾಲಾಗಿದೆ. ದ.ಆಫ್ರಿಕಾ ವಿರುದ್ಧ ಈ ಸಾಧನೆಯನ್ನು ವೀರೇಂದ್ರ ಸೆಹ್ವಾಗ್ ಮಾಡಿದ್ದರೆ ಒಟ್ಟಾರೆ ಭಾರತೀಯ ಆರಂಭಿಕರ ಪೈಕಿ ಈ ಸಾಧನೆಯನ್ನು ಇದಕ್ಕೆ ಮೊದಲು ವಿನೋದ್ ಕಾಂಬ್ಳಿ, ದಿಲೀಪ್ ಸರ್ದೇಸಾಯಿ ಮತ್ತು ಕನ್ನಡಿಗ ಕರುಣ್ ನಾಯರ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :