ವಿಶಾಖಪಟ್ಟಣ: ಪ್ರತಿಭೆಯಿದ್ದರೂ, ದೇಶೀಯ ಕ್ರಿಕೆಟ್ ನಲ್ಲಿ ಸಾಕಷ್ಟು ರನ್ ಗಳಿಸಿದ್ದರೂ ಕನ್ನಡಿಗ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಗೆ ಟೀಂ ಇಂಡಿಯಾ ಬಾಗಿಲು ತೆರೆದಿರಲೇ ಇಲ್ಲ. ಒಂದೊಮ್ಮೆ ಆಯ್ಕೆಗಾರರೇ ಸ್ವಲ್ಪ ದಿನ ಕಾದಿರು ಎಂದು ಕಡೆಗಣಿಸಿದ್ದರು. ಇಂದು ಅದೇ ಮಯಾಂಕ್ ಅವಕಾಶ ಕೊಟ್ಟಾಗ ಅದನ್ನು ಸರಿಯಾಗಿ ಬಳಸಿಕೊಂಡು ಕಾಯಿಸಿದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.