ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ನ ದ್ವಿತೀಯ ದಿನ ಕನ್ನಡಿಗ ಮಯಾಂಕ್ ಅಗರ್ವಾಲ್ ಶತಕ ಭಾರಿಸಿ ಕನಸು ನನಸು ಮಾಡಿಕೊಂಡಿದ್ದಾರೆ.ಟೆಸ್ಟ್ ಕ್ರಿಕೆಟ್ ನಲ್ಲಿ ಮಯಾಂಕ್ ಗೆ ಇದು ಚೊಚ್ಚಲ ಶತಕವಾಗಿದೆ. ನಿನ್ನೆಯ ದಿನದಂತ್ಯಕ್ಕೆ ಮಯಾಂಕ್ 84 ರನ್ ಗಳಿಸಿ ಅಜೇಯರಾಗುಳಿದಿದ್ದರು. ಇಂದು ಶತಕ ಗಳಿಸಿ ಸಂಭ್ರಮಸಿದ್ದಾರೆ.ಮಯಾಂಕ್ ಜತೆಗೆ ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಕೂಡಾ ನಿನ್ನೆಯ ಶತಕದ ಸ್ಕೋರ್ ವಿಸ್ತರಿಸಿದ್ದು ಇಂದು ಇತ್ತೀಚೆಗಿನ ವರದಿ ಬಂದಾಗ 140