ಮಯಾಂಕ್ ಅಗರ್ವಾಲ್ ತಲೆಗೆ ಪೆಟ್ಟು: ಮೊದಲ ಟೆಸ್ಟ್ ನಿಂದ ಹೊರಕ್ಕೆ

ಲಂಡನ್| Krishnaveni K| Last Modified ಮಂಗಳವಾರ, 3 ಆಗಸ್ಟ್ 2021 (09:10 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶ ಪಡೆಯುವ ಖುಷಿಯಲ್ಲಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಗೆ ಆಘಾತ ಸಿಕ್ಕಿದೆ.
 

ಅಭ್ಯಾಸ ಮಾಡುವಾಗ ಮೊಹಮ್ಮದ್ ಸಿರಾಜ್ ಎಸೆದ ಚೆಂಡು ತಲೆಗೆ ತಗುಲಿದ ಪರಿಣಾಮ ಕುಸಿದು ಕುಳಿತ ಮಯಾಂಕ್ ಕನ್ ಕಷನ್ ಗೊಳಗಾಗಿದ್ದು ವಿಶ್ರಾಂತಿಗೆ ಸೂಚಿಸಲಾಗಿದೆ.
 
ಹೀಗಾಗಿ ಆಗಸ್ಟ್ 4 ರಿಂದ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯಕ್ಕೆ ಅವರು ಗೈರು ಹಾಜರಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಜೊತೆ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಒಂದು ವೇಳೆ ರಾಹುಲ್ ಮಧ‍್ಯಮ ಕ್ರಮಾಂಕದಲ್ಲಿ ಆಡುವುದಾದರೆ ಅಭಿಮನ್ಯು ಈಶ್ವರನ್ ಅಥವಾ ಹನುಮ ವಿಹಾರಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಇದರಲ್ಲಿ ಇನ್ನಷ್ಟು ಓದಿ :