ಅಜ್ಜ-ಅಜ್ಜಿಯ ಜತೆ ಮಯಾಂಕ್ ಅಗರ್ವಾಲ್ ಫೋಟೋ ವೈರಲ್

ಬೆಂಗಳೂರು, ಗುರುವಾರ, 28 ನವೆಂಬರ್ 2019 (09:55 IST)

ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ತಮ್ಮ ಅಜ್ಜ-ಅಜ್ಜಿಯ ಜತೆಗೆ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದು, ಫುಲ್ ವೈರಲ್ ಆಗಿದೆ.


 
ಮಯಾಂಕ್ ಇದೀಗ ಬಿಡುವಿನ ವೇಳೆಯನ್ನು ತಮ್ಮ ಕುಟುಂಬದ ಜತೆಗೆ ಕಳೆಯುತ್ತಿದ್ದಾರೆ. ಈ ವೇಳೆ ತಮ್ಮ ಅಜ್ಜ ಮತ್ತು ಅಜ್ಜಿಯ ಜತೆಗೆ ವಾಕಿಂಗ್ ಮಾಡುತ್ತಿರುವ ಫೋಟೋ ಪ್ರಕಟಿಸಿದ್ದಲ್ಲದೆ, ಅವರ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
 
ಈಗಲೂ ಪ್ರತೀ ಪ್ರವಾಸ ಮುಗಿದ ಮೇಲೆ ನನ್ನ ಅಜ್ಜ-ಅಜ್ಜಿಯನ್ನು ಭೇಟಿಯಾಗಿ ಒಂದು ವಾಕಿಂಗ್ ಮಾಡುವೆ ಎಂದು ಮೊಮ್ಮಗ ಮಯಾಂಕ್ ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಹಿರಿಯ ಜೀವಗಳಿಗೆ ಗೌರವ ಕೊಡುವ ಮಯಾಂಕ್ ಬಗ್ಗೆ ಅಭಿಮಾನಿಗಳು ಕೊಂಡಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಜನವರಿವರೆಗೆ ನನ್ನ ಏನೂ ಕೇಳ್ಬೇಡಿ ಎಂದು ತಾಕೀತು ಮಾಡಿದ ಧೋನಿ

ಮುಂಬೈ: ಇತ್ತೀಚೆಗೆ ಧೋನಿ ಆಗಲೀ, ಟೀಂ ಇಂಡಿಯಾದ ಯಾವುದೇ ಸದಸ್ಯರು ಎಲ್ಲೇ ಹೋಗಲಿ ಅವರ ನಿವೃತ್ತಿ ಬಗ್ಗೆ ...

news

ಆಸ್ಟ್ರೇಲಿಯನ್ನರು ಯಾವತ್ತೂ ಅನಿಲ್ ಕುಂಬ್ಳೆಯನ್ನು ಈ ಕಾರಣಕ್ಕೆ ಸ್ಲೆಡ್ಜ್ ಮಾಡುತ್ತಿರಲಿಲ್ಲವಂತೆ!

ಬೆಂಗಳೂರು: 2007-08 ರ ವಿವಾದಾತ್ಮಕ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದವರು ...

news

ಹೆಂಡತಿಯನ್ನು ಖುಷಿಯಾಗಿಡಲು ಧೋನಿ ಹೇಳಿದ ಆ ಟ್ರಿಕ್ ಏನು ಗೊತ್ತಾ?

ರಾಂಚಿ: ಧೋನಿ ಮತ್ತು ಸಾಕ್ಷಿ ಸಿಂಗ್ ಹ್ಯಾಪೀ ಮ್ಯಾರೀಡ್ ಕಪಲ್ ಎನ್ನುವುದರಲ್ಲಿ ಸಂಶಯವಿಲ್ಲ. ಇಂತಿಪ್ಪ ಧೋನಿ ...

news

ಪುತ್ರನ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ: ದೂರು ನೀಡಿದ ಸಚಿನ್ ತೆಂಡುಲ್ಕರ್

ಮುಂಬೈ: ಪುತ್ರ ಅರ್ಜುನ್ ತೆಂಡುಲ್ಕರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯೊಂದನ್ನು ಸೃಷ್ಟಿಸಿ ಆಕ್ಷೇಪಾರ್ಹ ...