ಮೆಲ್ಬೋರ್ನ್: ಏಳು ಮಂದಿ ಭಯೋತ್ಪಾದಕರ ಬಂಧನದ ಹಿನ್ನಲೆಯಲ್ಲಿ ಸೋಮವಾರದಿಂದ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಭದ್ರತೆ ಬಿಗಿಗೊಳಿಸಲಾಗಿದೆ.ಈ ಏಳು ಮಂದಿ ಭಯೋತ್ಪಾಕದರು ಮೆಲ್ಬೋರ್ನ್ ನ ರೈಲು ನಿಲ್ದಾಣ ಬಳಿ ದಾಳಿಗೆ ಸಂಚು ಮಾಡಿದ್ದರೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಹೀಗಾಗಿ ಈ ಪಂದ್ಯಕ್ಕೆ ಬರುವ ವೀಕ್ಷಕರು ಕೆಲವೊಂದು ಮಾರ್ಪಾಡುಗಳನ್ನು ಸಹಿಸಿಕೊಳ್ಳಬೇಕಾಗಬಹುದು.