ದುಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಡುವಿಲ್ಲದ ಕ್ರಿಕೆಟ್ ನ ಜೊತೆಗೆ ಈಗ ಬಯೋ ಬಬಲ್ ವಾತಾವರಣದಲ್ಲಿ ಏಗುವುದು ಅತೀ ದೊಡ್ಡ ಸವಾಲಾಗಿದೆ.ಕಳೆದೊಂದು ವರ್ಷದಿಂದ ಕ್ರಿಕೆಟಿಗರು ಜೈವ ಸುರಕ್ಷಾ ವಲಯದಲ್ಲಿ ಬಂಧಿಗಳಾಗಿದ್ದಾರೆ. ಹೊರಗೆ ಮನಸೋ ಇಚ್ಛೆ ಓಡಾಡುವಂತಿಲ್ಲ. ಹೊರಗಿನವರನ್ನು ಭೇಟಿಯಾಗುವಂತಿಲ್ಲ. ಕುಟುಂಬದವರ ಜೊತೆ ಬೇಕೆಂದಾಗ ಇರುವಂತಿಲ್ಲ.ಒಟ್ಟಿನಲ್ಲಿ ದೈಹಿಕ ಕ್ಷಮತೆ ಜೊತೆಗೆ ಮಾನಸಿಕವಾಗಿಯೂ ಆಟಗಾರರು ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ನಾಯಕ ಕೊಹ್ಲಿ ಈ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಇತ್ತೀಚೆಗೆ ಕುರ್ಚಿಯಲ್ಲಿ