ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ ಸಾಧನೆ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ, ಕ್ರಿಕೆಟ್ ವಿಶ್ಲೇಷಕ ಮೈಕಲ್ ವಾನ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ‘ಅವರ ನಾಯಕತ್ವದ ಸಾಧನೆಯ ಪುಸ್ತಕದಲ್ಲಿ ಟ್ರೋಫಿ ಗೆಲ್ಲಲಾಗದ ಅಂಶ ಯಾವತ್ತಿಗೂ ಉಳಿದುಕೊಳ್ಳಲಿದೆ. ಇಂತಹ ಪ್ರಮುಖ ಟೂರ್ನಿಗಳಲ್ಲಿ ಗೆಲುವುಗಳು, ಚಾಂಪಿಯನ್ ಆಗುವುದು ಮುಖ್ಯವಾಗುತ್ತದೆ. ಅದಿಲ್ಲದೇ ಹೋದಾಗ ಅವರನ್ನು ಅವರು ಫೈಲ್ಡ್ ಕ್ಯಾಪ್ಟನ್ ಎಂದೇ ಹೇಳಬೇಕಾಗುತ್ತದೆ. ಅಂತಹ ಒಳ್ಳೆಯ ಆಟಗಾರನಾಗಿ ಟ್ರೋಫಿಯಿಲ್ಲದೇ ಬರಿಗೈಯಲ್ಲಿ ಇರುವುದು