Widgets Magazine

ಪತ್ನಿ ಭಾರತದ ವಿರುದ್ಧ ವಿಶ್ವಕಪ್ ಟಿ20 ಆಡುವುದನ್ನು ನೋಡಲು ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದ ಮಿಚೆಲ್ ಸ್ಟಾರ್ಕ್!

ಸಿಡ್ನಿ| Krishnaveni K| Last Modified ಶನಿವಾರ, 7 ಮಾರ್ಚ್ 2020 (09:11 IST)
ಸಿಡ್ನಿ: ಭಾನುವಾರ ಭಾರತದ ವಿರುದ್ಧ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪತ್ನಿ ಅಲಿಸಾ ಹೀಲೇ ಆಸ್ಟ್ರೇಲಿಯಾ ಪರ ಆಡುವುದನ್ನು ನೋಡಲು ಆಸೀಸ್ ಪುರುಷರ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಮಿಚೆಲ್ ಸ್ಟಾರ್ಕ್ ದ.ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.

 
ಮಿಚೆಲ್ ತಮ್ಮ ಪತ್ನಿಯ ಆಟವನ್ನು ನೇರವಾಗಿ ನೋಡಿ ಅತಿಥೇಯ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಚಿಯರ್ ಅಪ್ ಮಾಡಲು ಮೈದಾನಕ್ಕೆ ಬರಲಿದ್ದಾರೆ. ಇದಕ್ಕಾಗಿ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ.
 
ಮಿಚೆಲ್ ಮನವಿಯನ್ನು ಪುರಸ್ಕರಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ‘ಮಿಚೆಲ್ ಗೆ ಇದು ಜೀವಮಾನದಲ್ಲೇ ಸ್ಮರಣೀಯ ಕ್ಷಣ. ಹಾಗಾಗಿ ಅವರನ್ನು ತಂಡದಿಂದ ಒಂದು ಪಂದ್ಯದ ಮಟ್ಟಿಗೆ ಹೊರಗಿಡುತ್ತಿದ್ದೇವೆ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :