ಮುಂಬೈ: ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಐಸಿಸಿಯ ಮಹಿಳೆಯರ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.ಒಟ್ಟು 762 ಅಂಕ ಸಂಪಾದಿಸಿರುವ ಮಿಥಾಲಿ ದಕ್ಷಿಣ ಆಫ್ರಿಕಾದ ಲಿಝೆಲ್ ಲೀ ಜೊತೆಗೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಈ ಮೊದಲು ಏಕಾಂಗಿಯಾಗಿ ನಂ.1 ಸ್ಥಾನದಲ್ಲಿದ್ದ ಮಿಥಾಲಿಗೆ ಈಗ ಲೀ ಜೊತೆಯಾಗಿದ್ದಾರೆ.ಇವರಲ್ಲದೆ, ಮಹಿಳೆಯರ ಟಿ20 ಕ್ರಿಕೆಟ್ ನಲ್ಲಿ ಭಾರತದ ಹೊಡೆಬಡಿಯ ಆಟಗಾರ್ತಿ ಶಫಾಲಿ ವರ್ಮ ಅಗ್ರ ಸ್ಥಾನದಲ್ಲಿದ್ದಾರೆ.