ಮುಂಬೈ: ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ರನ್ನು ಕಡೆಗಣಿಸಿದ ನಂತರ ಎದ್ದಿರುವ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಅದಕ್ಕಿಂತ ಮೊದಲೇ ಮತ್ತೊಂದು ವಿವಾದ ಸೇರಿಕೊಂಡಿದೆ.ಬೇಕೆಂದೇ ಪ್ರಮುಖ ಪಂದ್ಯಕ್ಕೆ ಫಾರ್ಮ್ ನಲ್ಲಿದ್ದ, ಹಿರಿಯ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ರನ್ನು ಕೈ ಬಿಡಲಾಯಿತು ಎಂಬ ಆರೋಪಗಳ ಬೆನ್ನಲ್ಲೇ ಮಿಥಾಲಿ ಮತ್ತು ನಾಯಕಿ ಹರ್ಮನ್ ಪ್ರೀತ್ ರನ್ನು ಕರೆಸಿಕೊಂಡು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿಚಾರಣೆ