ಬೇ ಓವಲ್: ಇಂಗ್ಲೆಂಡ್ ವಿರುದ್ಧ ಇಂದು ನಡೆದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಹೋರಾಡಿ ಸೋಲುಂಡಿದೆ.ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಬ್ಯಾಟಿಂಗ್ ಕೈ ಕೊಟ್ಟಿತ್ತು. ಹೀಗಾಗಿ 134 ರನ್ ಗಳಿಗೇ ಆಲೌಟ್ ಆಯಿತು. ಪ್ರಬಲ ಇಂಗ್ಲೆಂಡ್ ಈ ಮೊತ್ತ ದಾಟುವುದು ಸುಲಭವೆಂದೇ ಎಲ್ಲರೂ ಅಂದುಕೊಂಡಿದ್ದರು.ಆದರೆ ಭಾರತೀಯ ಬೌಲರ್ ಗಳು ಅಷ್ಟು ಬೇಗ ಗೆಲುವು ಬಿಟ್ಟುಕೊಡಲಿಲ್ಲ. ಆರಂಭಿಕರನ್ನು ಬೇಗನೇ ಪೆವಿಲಿಯನ್ ಗೆ ಕಳುಹಿಸಿದ ಭಾರತೀಯರಿಗೆ ಮಧ್ಯಮ ಕ್ರಮಾಂಕ ಕಂಟಕವಾಯಿತು.