ದಯವಿಟ್ಟು ನಮ್ಮನ್ನು ಬೈಬೇಡಿ ಪ್ಲೀಸ್ ಎಂದು ಬೇಡಿಕೊಂಡ ಪಾಕ್ ಬೌಲರ್ ಮೊಹಮ್ಮದ್ ಅಮೀರ್

ಲಂಡನ್, ಬುಧವಾರ, 19 ಜೂನ್ 2019 (10:30 IST)

ಲಂಡನ್: ಟೀಂ ಇಂಡಿಯಾ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ 89 ರನ್ ಗಳ ಹೀನಾಯ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 9 ನೇ ಸ್ಥಾನಕ್ಕಿಳಿದಿರುವ ಪಾಕ್ ಕ್ರಿಕೆಟಿಗರನ್ನು ಅಲ್ಲಿನ ಅಭಿಮಾನಿಗಳು ಬಾಯಿಗೆ ಬಂದಂತೆ ಟೀಕಿಸುತ್ತಿದ್ದಾರೆ.


 
ಟೀಕೆಗಳಿಂದ ಬೇಸತ್ತಿರುವ ಕ್ರಿಕೆಟಿಗರು ಈಗ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಮನವಿಗಳ ಮೇಲೆ ಮನವಿ ಮಾಡುತ್ತಿದ್ದಾರೆ. ಶೊಯೇಬ್ ಮಲಿಕ್ ಬಳಿಕ ಇದೀಗ ವೇಗಿ ಮೊಹಮ್ಮದ್ ಅಮೀರ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
 
‘ದಯವಿಟ್ಟು ನಮ್ಮನ್ನು ಕೆಟ್ಟ ಶಬ್ಧಗಳಲ್ಲಿ ನಿಂದಿಸಬೇಡಿ. ಬೇಕಿದ್ದರೆ ನಮ್ಮ ಪ್ರದರ್ಶನದ ಬಗ್ಗೆ ವಿಮರ್ಶಿಸಿ. ಆದರೆ ಬೈಬೇಡಿ ಪ್ಲೀಸ್. ದೇವರ ಕೃಪೆಯಿಂದ ಮುಂದಿನ ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ’ ಎಂದು ಅಮೀರ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ಗಾಗಿಯೇ ಡೈಮಂಡ್ ನೆಕ್ಲೇಸ್ ಮಾಡಿಸಿಕೊಂಡಿದ್ದಾರಂತೆ ಹಾರ್ದಿಕ್ ಪಾಂಡ್ಯ!

ಲಂಡನ್: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಆಗಾಗ ತಮ್ಮ ಫ್ಯಾಶನ್ ಸೆನ್ಸ್ ನಿಂದಾಗಿಯೇ ಸುದ್ದಿಯಾಗುತ್ತಾರೆ. ...

news

ಕೆಎಲ್ ರಾಹುಲ್ ಜತೆಗೆ ಹೊಂದಾಣಿಕೆ ರೋಹಿತ್ ಶರ್ಮಾಗೆ ತಲೆನೋವು!

ಲಂಡನ್: ಪಾಕಿಸ್ತಾನ ವಿರುದ್ಧ ವಿಶ್ವಕಪ್ ಕೂಟದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿದ ...

news

ನನ್ನ ಕುಟುಂಬದವರನ್ನು ಬಿಟ್ಟು ಬಿಡಿ! ಟೀಕಾಕಾರರಿಗೆ ಮನವಿ ಮಾಡಿದ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್

ಲಂಡನ್: ಭಾರತದ ವಿರುದ್ಧ ವಿಶ್ವಕಪ್ ನಲ್ಲಿ ಹೀನಾಯ ಸೋಲಿನ ಬಳಿಕ ಪಾಕ್ ಕ್ರಿಕೆಟಿಗರ ಮೇಲೆ ...

news

ಮನೆಗೆ ಹೋಗೋನು ನಾನು ಒಬ್ನೇ ಅಲ್ಲ! ಭಾರತ ವಿರುದ್ಧ ಸೋತ ಬಳಿಕ ಪಾಕ್ ನಾಯಕನಿಂದ ಎಚ್ಚರಿಕೆ!

ಲಂಡನ್: ಭಾರತದ ವಿರುದ್ಧ ವಿಶ್ವಕಪ್ ಪಂದ್ಯವನ್ನು ಸೋತಿದ್ದಕ್ಕೆ ಪಾಕಿಸ್ತಾನ ತಂಡದ ಕ್ರಿಕೆಟಿಗರ ವಿರುದ್ಧ ...