ಡೆಹ್ರಾಡೂನ್: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪಕ್ಕೊಳಗಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಕಾರು ಅಪಘಾತಕ್ಕೀಡಾಗಿದೆ. ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಶಮಿ ತಲೆಗೆ ಗಾಯವಾಗಿದೆ ಎನ್ನಲಾಗಿದೆ. ತಕ್ಷಣ ಕ್ರಿಕೆಟಿಗನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತಲೆಯ ಗಾಯಕ್ಕೆ 10 ಹೊಲಿಗೆ ಹಾಕಲಾಗಿದೆ.ಪತ್ನಿ ಹಸೀನ್ ಜಹಾನ್ ಗೃಹ ಹಿಂಸೆ ನೀಡಿದ ಆರೋಪದಲ್ಲಿ ಇತ್ತೀಚೆಗಷ್ಟೇ ಶಮಿ ವಿರುದ್ಧ ಕೋಲ್ಕೊತ್ತಾ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.