ಲಾರ್ಡ್ಸ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಈಗ ವಿಕೆಟ್ ಬಿದ್ದೊಡನೆ ಸಂಭ್ರಮಿಸುವ ಪರಿ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಬಗ್ಗೆ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ವಿಕೆಟ್ ಕಿತ್ತ ಬಳಿಕ ಸಿರಾಜ್ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಿಸುತ್ತಾರೆ. ಇದು ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಕ್ಕೆ ಅವರೇ ವಿವರಣೆ ಕೊಟ್ಟಿದ್ದಾರೆ.‘ಟೀಕಾಕಾರರು ಯಾವತ್ತೂ ನನ್ನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಅವರಿಗೆ ನನ್ನ ಪ್ರದರ್ಶನದ ಮೂಲಕ ಉತ್ತರ ನೀಡಬೇಕು ಎಂದು ಬಯಸಿದ್ದೆ.