ಏರ್ ಪೋರ್ಟ್ ನಿಂದ ನೇರವಾಗಿ ತಂದೆಯ ಸಮಾಧಿಗೆ ತೆರಳಿದ ಮೊಹಮ್ಮದ್ ಸಿರಾಜ್

ಮುಂಬೈ| Krishnaveni K| Last Modified ಗುರುವಾರ, 21 ಜನವರಿ 2021 (17:51 IST)
ಮುಂಬೈ: ಆಸ್ಟ್ರೇಲಿಯಾ ಸರಣಿ ನಡುವೆ ತಂದೆಯನ್ನು ಕಳೆದುಕೊಂಡಿದ್ದ ಟೀಂ ಇಂಡಿಯಾ ಯುವ ವೇಗಿ ಮೊಹಮ್ಮದ್ ಸಿರಾಜ್ ನೇರವಾಗಿ ತವರಿಗೆ ಬಂದಿಳಿದೊಡನೆ ತಂದೆಯ ಸಮಾಧಿ ಬಳಿ ತೆರಳಿದ್ದಾರೆ.

 
ಆಸ್ಟ್ರೇಲಿಯಾ ಸರಣಿ ಮುಗಿಸಿ ಭಾರತೀಯ ಕ್ರಿಕೆಟಿಗರು ಮುಂಜಾನೆ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ನೇರವಾಗಿ ಸಿರಾಜ್ ಏರ್ ಪೋರ್ಟ್ ನಿಂದ ಮನೆಗೆ ತೆರಳುವ ಮೊದಲು ತಂದೆಯ ಸಮಾಧಿ ಬಳಿ ತೆರಳಿ ನಮಸ್ಕರಿಸಿದ್ದಾರೆ. ಟೆಸ್ಟ್ ಪಂದ್ಯದ ವೇಳೆ ರಾಷ್ಟ್ರಗೀತೆ ಹಾಡುವಾಗಲೂ ತಂದೆಯನ್ನು ನೆನೆಸಿಕೊಂಡು ಸಿರಾಜ್ ಭಾವುಕರಾಗಿದ್ದರು.
ಇದರಲ್ಲಿ ಇನ್ನಷ್ಟು ಓದಿ :