ಮೊಟೆರಾದಲ್ಲಿ ಸಮಸ್ಯೆ ಪಿಚ್ ನದ್ದಲ್ಲ! ಬ್ಯಾಟಿಂಗ್ ಕುಸಿತಕ್ಕೆ ಕಾರಣವೇನು?

ಅಹಮ್ಮದಾಬಾದ್| Krishnaveni K| Last Updated: ಶನಿವಾರ, 27 ಫೆಬ್ರವರಿ 2021 (09:28 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಕೇವಲ ಎರಡೇ ದಿನದಲ್ಲಿ ಮುಕ್ತಾಯ ಕಂಡಿದ್ದು, ಹಲವರು ಪಿಚ್ ಮೇಲೆ ಅಸಮಾಧಾನ ತೋರುವಂತೆ ಮಾಡಿದೆ.

 

ಆದರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವರು ಹೇಳುವಂತೆ ಇದು ಪಿಚ್ ನ ಸಮಸ್ಯೆಯಲ್ಲ. ಇಲ್ಲಿ ಬ್ಯಾಟ್ಸ್ ಮನ್ ಗಳು ತಾಳ್ಮೆಯಿಂದ ನಿಂತು ಆಡಿದರೆ ರನ್ ಗಳಿಸಲು ಸಾಧ್ಯವಿದೆ. ಇಲ್ಲಿನ ಪಿಚ್ ನಲ್ಲಿ ಸ್ಪಿನ್ನರ್ ಗಳನ್ನು ಹೇಗೆ ಎದುರಿಸಬೇಕೆಂದು ಅರಿಯದೇ ಬ್ಯಾಟ್ಸ್ ಮನ್ ಗಳು ವೈಫಲ್ಯ ಅನುಭವಿಸಿದರು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಶರ್ಮಾ ಸ್ವತಃ ಬ್ಯಾಟಿಂಗ್ ಮಾಡುವ ಮೂಲಕ ರನ್ ಗಳಿಸುವ ಕಲೆ ಹೇಗೆಂದು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಇದು ಕೇವಲ ಪಿಚ್ ನ ಸಮಸ್ಯೆಯಲ್ಲ ಎನ್ನುವುದು ಪಕ್ಕಾ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :