ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಫನ್ನಿ ಘಟನೆಯೊಂದು ನಡೆದಿದೆ.ನಿನ್ನೆಯ ದಿನದಾಟದ ವೇಳೆ ಸ್ಪೈಡರ್ ಕ್ಯಾಮರಾ ತಾಂತ್ರಿಕ ದೋಷದಿಂದ ಮೈದಾನಕ್ಕೆ ಸಮೀಪ ಬಂದು ನಿಂತಿತ್ತು. ಮೇಲೆ ಹೋಗಲಾಗದೇ ಕೆಳಗೇ ನೇತಾಡುತ್ತಿದ್ದ ಕ್ಯಾಮರಾ ಟೀಂ ಇಂಡಿಯಾ ಕ್ರಿಕೆಟಿಗರ ಪಾಲಿಗೆ ತಮಾಷೆಯ ವಸ್ತುವಾಯಿತು.ಕ್ಯಾಮರಾ ಬಳಿ ಬಂದ ನಾಯಕ ಕೊಹ್ಲಿ ಕ್ಯಾಮರಾಗೆ ತಟ್ಟಿ, ಇಲ್ಲೇನು ಮಾಡ್ತಿದ್ದೀಯಾ? ಮೇಲೆ ಹೋಗು ಎಂದು ಸನ್ನೆ ಮಾಡಿದರು. ಇನ್ನು ರವಿಚಂದ್ರನ್ ಅಶ್ವಿನ್