ನಾಗ್ಪುರ: ಟೀಂ ಇಂಡಿಯಾದಲ್ಲಿ ಈಗ ಸ್ಥಾನ ಉಳಿಸಿಕೊಳ್ಳಬೇಕಾದರೆ ಸಿಗುವುದು ಒಂದೇ ಛಾನ್ಸ್. ಅದನ್ನು ತಪ್ಪಿಸಿದರೆ ಮತ್ತೆ ತಂಡದಲ್ಲಿ ತಮ್ಮ ಸ್ಥಾನ ಬೇರೆಯವರದಾಗುತ್ತದೆ ಎನ್ನುವುದು ಮುರಳಿ ವಿಜಯ್ ಗೆ ಚೆನ್ನಾಗಿ ಅರ್ಥವಾಗಿದೆ. ಹಾಗಾಗಿಯೇ ಬಹುದಿನಗಳ ನಂತರ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ತಮಿಳುನಾಡು ಮೂಲದ ಬ್ಯಾಟ್ಸ್ ಮನ್ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ (56) ಗಳಿಸಿ ಆಡುತ್ತಿದ್ದಾರೆ. ಅಷ್ಟೇ ಅಲ್ಲ, ಕೆಎಲ್ ರಾಹುಲ್ ಆರಂಭದಲ್ಲಿಯೇ ನೀಡಿದ್ದ ಆಘಾತದಿಂದ