ಮುಂಬೈ: ಐಪಿಎಲ್ 2022 ರಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಗೆ ಮಾಲಕಿ ನೀತಾ ಅಂಬಾನಿ ಸಂದೇಶ ಕಳುಹಿಸಿದ್ದಾರೆ.ಈ ಕೂಟದಲ್ಲಿ ಮುಂಬೈ ಇದುವರೆಗೆ ಒಂದೇ ಒಂದು ಗೆಲುವು ದಾಖಲಿಸಿಲ್ಲ. ಇದರಿಂದಾಗಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಇಡೀ ತಂಡವೇ ಬೇಸರದಲ್ಲಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋತ ಬಳಿಕ ನೀತಾ ಅಂಬಾನಿ ಆಟಗಾರರಿಗೆ ಧೈರ್ಯ ತುಂಬಿದ್ದಾರೆ. ‘ನಿಮ್ಮ ಜೊತೆಗೆ ನಾವಿದ್ದೇವೆ. ಈಗ ನಾವು ಭವಿಷ್ಯದ ಬಗ್ಗೆ ಮಾತ್ರ ಚಿಂತಿಸೋಣ.