ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಬಹುತೇಕರು ಗಾಯಾಳುಗಳಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಮುಂದಿನ ಪಂದ್ಯಕ್ಕೆ ಸ್ವತಃ ರವಿಶಾಸ್ತ್ರಿಯೇ ನಿವೃತ್ತಿ ಹಿಂಪಡೆದು ಬ್ಯಾಟ್ ಹಿಡಿದು ಕಣಕ್ಕಿಳಿಯುತ್ತಾರಂತೆ! ಭಾರತೀಯ ಕ್ರಿಕೆಟಿಗರ ಗಾಯಾಳುಗಳ ಲಿಸ್ಟ್ ಬೆಳೆಯುತ್ತಿರುವುದು ನೋಡಿ ನೆಟ್ಟಿಗರು ಹೀಗೆಂದು ಟ್ರೋಲ್ ಮಾಡಿದ್ದಾರೆ. ಟೀಂ ಇಂಡಿಯಾದ ಸದ್ಯದ ಅವಸ್ಥೆ ನೋಡಿದರೆ ಮುಂದಿನ ಪಂದ್ಯಕ್ಕೆ ರವಿಶಾಸ್ತ್ರಿ ಹಾಗೂ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರೇ ನಿವೃತ್ತಿ ಹಿಡಿದು ಕಣಕ್ಕಿಳಿಯಬೇಕಾದೀತು