ಮುಂಬೈ: ಗಾಯಗೊಂಡು ಟಿ20 ವಿಶ್ವಕಪ್ ನಂತಹ ಮಹತ್ವದ ಟೂರ್ನಿಯಿಂದ ಹೊರಹೋಗಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮೇಲೆ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.ಬುಮ್ರಾ ಟೀಂ ಇಂಡಿಯಾ ಪರ ಆಡುವುದಕ್ಕಿಂತ ಬೆನ್ನು ನೋವೆಂದು ಹೊರಗುಳಿಯುವುದೇ ಜಾಸ್ತಿಯಾಗಿದೆ. ಇದಕ್ಕೆಲ್ಲಾ ಐಪಿಎಲ್ ಕೂಟದಲ್ಲಿ ಅವರು ಸತತವಾಗಿ ಆಡುವುದೇ ಕಾರಣ ಎನ್ನುವುದು ಅಭಿಮಾನಿಗಳ ಆರೋಪ.ಹೀಗಾಗಿ ಬುಮ್ರಾಗೆ ನೀವು ಮುಂಬೈ ಇಂಡಿಯನ್ಸ್ ಪರ ಮಾತ್ರ ಆಡುತ್ತಿರಿ ಎಂದು ಕೆಂಡ ಕಾರಿದ್ದಾರೆ. ಅತಿಯಾದ ಐಪಿಎಲ್ ಪಂದ್ಯವೇ ಪಾಂಡ್ಯ ಗಾಯಕ್ಕೆ ಕಾರಣ