ದುಬೈ: ಟಿ20 ವಿಶ್ವಕಪ್ ನಲ್ಲಿ ಇಂದು ಫೈನಲ್ ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.ಸರಣಿಯುದ್ದಕ್ಕೂ ಕೂಲ್ ಆಗಿ ಆಡಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಎರಡು ಸಮಬಲದ ತಂಡಗಳು. ಹೀಗಾಗಿ ಈ ಫೈನಲ್ ಕುತೂಹಲಕ್ಕೆ ಕಾರಣವಾಗಿದೆ.ಪ್ರಮುಖವಾಗಿ ನ್ಯೂಜಿಲೆಂಡ್ ಇತ್ತೀಚೆಗಿನ ದಿನಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನವನ್ನೇ ತೋರುತ್ತಿದೆ. ಹೀಗಾಗಿ ಇಲ್ಲೂ ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ. ಕಿವೀಸ್ ಗೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಡೆವನ್ ಕಾನ್ವೆ ಅನುಪಸ್ಥಿತಿ