ನವದೆಹಲಿ: ಭಾರತದ ವಿರುದ್ಧ ಕಿರು ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ಯುವ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ರದ್ದೇ ಭಯ ಶುರುವಾಗಿದೆ. ಇತ್ತೀಚೆಗೆ ಕಿರು ಮಾದರಿಯ ಕ್ರಿಕೆಟ್ ನಲ್ಲಿ ಭಾರೀ ಯಶಸ್ವಿಯಾಗುತ್ತಿರುವ ಈ ಯುವ ಜೋಡಿ ಆಸ್ಟ್ರೇಲಿಯನ್ನರಿಗೂ ನಡುಕ ಹುಟ್ಟಿಸಿದ್ದರು. ಇದೀಗ ನ್ಯೂಜಿಲೆಂಡ್ ಆಟಗಾರರೂ ಇವರನ್ನು ಎದುರಿಸುವ ಬಗೆ ಹೇಗೆಂದು ಚಿಂತಿತರಾಗಿದ್ದಾರಂತೆ.ಕುಲದೀಪ್, ಯಜುವೇಂದ್ರ ಐಪಿಎಲ್ ನಲ್ಲಿ ಚೆನ್ನಾಗಿ ಪಳಗಿದ್ದಾರೆ. ಅವರನ್ನು ಎದುರಿಸುವುದೇ ದೊಡ್ಡ