ಮುಂಬೈ: ಭಾರತದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ವರ್ಷದ ಐಪಿಎಲ್ ಆವೃತ್ತಿಯನ್ನು ವಿದೇಶದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಇದರ ಬೆನ್ನಲ್ಲೇ ಯುಎಇ, ಶ್ರೀಲಂಕಾ ಐಪಿಎಲ್ ಆಯೋಜಿಸಲು ಸಿದ್ಧ ಎಂದು ಘೋಷಿಸಿತ್ತು. ಅದರ ಜತೆಗೆ ನ್ಯೂಜಿಲೆಂಡ್ ಕೂಡಾ ಐಪಿಎಲ್ ಆಯೋಜನೆಗೆ ಮುಂದೆ ಬಂದಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಇದರ ಬಗ್ಗೆ ಈಗ ಕಿವೀಸ್ ಕ್ರಿಕೆಟ್ ಮಂಡಳಿ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.ನಾವು ಐಪಿಎಲ್ ಆಯೋಜಿಸುತ್ತೇವೆ ಎಂದು ಆಹ್ವಾನ ನೀಡಿಲ್ಲ.