ಕೊಲೊಂಬೊ: ಇದೆಂತಹಾ ವಿಚಿತ್ರ ಎಂದು ನಿಮಗನಿಸಿದರೂ ಸತ್ಯ. ಶ್ರೀಲಂಕಾ ಕ್ರಿಕೆಟ್ ತಂಡದ ಮ್ಯಾನೇಜರ್ ಕ್ರಿಕೆಟಿಗರು ಡ್ರೆಸ್ಸಿಂಗ್ ರೂಂನೊಳಗೆ ಬಿಸ್ಕೆಟ್ ತರಬಾರದೆಂದು ಕಟ್ಟಪ್ಪಣೆ ಮಾಡಿದ್ದಾರೆ. ಬಿಸ್ಕೆಟ್ ಏನಾದ್ರೂ ಮ್ಯಾಚ್ ಫಿಕ್ಸಿಂಗ್ ಮಾಡುತ್ತಾ? ಎಂದು ನೀವು ಕೇಳಬಹುದು. ಆದರೆ ಆಟಗಾರರ ಗಾಯದಿಂದ ಬೇಸತ್ತಿರುವ ಶ್ರೀಲಂಕಾ ಕ್ರಿಕೆಟ್, ಫಿಟ್ ಆಗಿರಲು ಇಂತಹದ್ದೊಂದು ಫರ್ಮಾನ್ ಹೊರಡಿಸಿದೆ.ಡ್ರೆಸ್ಸಿಂಗ್ ರೂಂನೊಳಗೆ ಬಿಸ್ಕೆಟ್ ನಿಷೇಧಿಸಿದ್ದಕ್ಕೆ ಕೆಲವು ಆಟಗಾರರು ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಪ್ರತಿಭಟನೆಯನ್ನೂ ವ್ಯಕ್ತಪಡಿಸಿದ್ದರಂತೆ.