ಕೊಲೊಂಬೋ: ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಗಳ ಸರಣಿ ಆಡಲು ಬಂದಿಳಿದ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾಗೆ ಎಂದಿನಂತೆ ಅದ್ಧೂರಿ ಸ್ವಾಗತ ಸಿಕ್ಕಿಲ್ಲ. ರಾಹುಲ್ ದ್ರಾವಿಡ್-ಶಿಖರ್ ಧವನ್ ನೇತೃತ್ವದ ತಂಡ ಕೊಲೊಂಬೋದ ತಾಜ್ ಸಮುದ್ರ ಹೋಟೆಲ್ ನಲ್ಲಿ ಉಳಿದುಕೊಂಡಿದೆ. ಇಲ್ಲಿ ಮೂರು ದಿನಗಳ ಕ್ವಾರಂಟೈನ್ ಗೊಳಗಾಗಲಿದೆ.ಸಾಮಾನ್ಯವಾಗಿ ಲಂಕಾದಲ್ಲಿ ಟೀಂ ಇಂಡಿಯಾಗೆ ಹಾರ ಹಾಕಿ ಸಾಂಪ್ರದಾಯಿಕ ಸ್ವಾಗತ ಸಿಗುತ್ತದೆ. ಆದರೆ ಈ ಬಾರಿ ಕೊರೋನಾ ಕಾರಣದಿಂದಾಗಿ ಯಾವುದೇ ಅದ್ಧೂರಿ ಸ್ವಾಗತವಿರಲಿಲ್ಲ.