ವಿಶ್ವಕಪ್ 2019 ತಂಡದಲ್ಲಿ ಧೋನಿ, ವಿರಾಟ್ ಕೊಹ್ಲಿಗೆ ಸ್ಥಾನವೇ ಇಲ್ಲ!

ಲಂಡನ್| Krishnaveni K| Last Modified ಸೋಮವಾರ, 8 ಜುಲೈ 2019 (09:21 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ಆರಂಭವಾಗಿ ಒಂದು ತಿಂಗಳೇ ಕಳೆದಿವೆ. ಇದೀಗ ಲೀಗ್ ಹಂತದ ಪಂದ್ಯಗಳು ಕೊನೆಯಾಗಿದ್ದು, ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ಮಾತ್ರವೇ ಬಾಕಿ ಉಳಿದಿದೆ.  
> ಈ ಹಂತದವರೆಗಿನ ಆಟಗಾರರ ಪ್ರದರ್ಶನ ಆಧರಿಸಿ ವಿಶ್ವ ಇಲೆವೆನ್ ತಂಡದ ಆಟಗಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿಗೆ ಸ್ಥಾನ ಸಿಕ್ಕಿಲ್ಲ.>   ಭಾರತದ ಆಟಗಾರರ ಪೈಕಿ ರೋಹಿತ್ ಶರ್ಮಾ, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ‍ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ಸ, ಬಾಂಗ್ಲಾದ ಶಕೀಬ್ ಅಲ್ ಹಸನ್, ಇಂಗ್ಲೆಂಡ್ ನ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಮುಂತಾದವರು ಸ್ಥಾನ ಪಡೆದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :