ಜಸ್ಪ್ರೀತ್ ಬುಮ್ರಾ ವಿಚಾರದಲ್ಲಿ ಟೀಂ ಇಂಡಿಯಾಗೊಂದು ಗುಡ್ ನ್ಯೂಸ್

ಮುಂಬೈ| Krishnaveni K| Last Modified ಶನಿವಾರ, 26 ಅಕ್ಟೋಬರ್ 2019 (10:06 IST)
ಮುಂಬೈ: ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದ ದ.ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದರು. ಈಗ ಅವರ ವಿಚಾರದಲ್ಲಿ ಗುಡ್ ನ್ಯೂಸ್ ಒಂದು ಸಿಕ್ಕಿದೆ.

 
ಬೆನ್ನಿನ ಭಾಗದ ನೋವಿಗೆ ತುತ್ತಾಗಿದ್ದ ಬುಮ್ರಾ ಕಳೆದ ಕೆಲವು ದಿನಗಳಿಂದ ವಿಶ್ರಾಂತಿಯಲ್ಲಿದ್ದಾರೆ. ಚಿಕಿತ್ಸೆಗಾಗಿ ಇಂಗ್ಲೆಂಡ್ ಗೆ ತೆರಳಿರುವ ಅವರು ವೈದ್ಯರನ್ನು ಸಂಪರ್ಕಿಸಿದ್ದಾರೆ.
 
ಈ ವೇಳೆ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಹೀಗಾಗಿ ಬುಮ್ರಾಗೆ ಸಾಂಪ್ರದಾಯಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಬೇಗನೇ ಚೇತರಿಸಿಕೊಂಡು ಆಟಕ್ಕೆ ಮರಳುವ ನಿರೀಕ್ಷೆಯಿದೆ. ಬ್ಯುಸಿ ಶೆಡ್ಯೂಲ್ ಹೊಂದಿರುವ ಟೀಂ ಇಂಡಿಯಾ ಪಾಲಿಗೆ ಇದು ನಿಜಕ್ಕೂ ಗುಡ್ ನ್ಯೂಸ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :