Widgets Magazine

ವಿಶ್ವಕಪ್ ಕ್ರಿಕೆಟ್ ಮಹಾಸಮರಕ್ಕೆ ಇಂದು ಚಾಲನೆ: ದುರಾದೃಷ್ಟವಂತರ ನಡುವೆ ಮೊದಲ ಹಣಾಹಣಿ

ದಿ ಓವಲ್| Krishnaveni K| Last Modified ಗುರುವಾರ, 30 ಮೇ 2019 (09:19 IST)
ದಿ ಓವಲ್: ಏಕದಿನ ವಿಶ್ವಕಪ್ ಕ್ರಿಕೆಟ್ ಮಹಾ ಸಮರಕ್ಕೆ ಇಂದು ಇಂಗ್ಲೆಂಡ್ ನ ದಿ ಓವಲ್ ಮೈದಾನದಲ್ಲಿ ಚಾಲನೆ ದೊರೆಯುತ್ತಿದೆ.

 
ಇಂದಿನಿಂದ ಜುಲೈ 14 ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಇಂದು ಮೊದಲ ಪಂದ್ಯ ಅತಿಥೇಯ ಇಂಗ್ಲೆಂಡ್ ಮತ್ತು ದ.ಆಫ್ರಿಕಾ ನಡುವೆ ನಡೆಯಲಿದೆ. ವಿಶ್ವಕಪ್ ಕ್ರಿಕೆಟ್ ಶುರುವಾಗಿ 44 ವರ್ಷವಾಗಿದ್ದು, ಇದುವರೆಗೆ ಕ್ರಿಕೆಟ್ ಜನಕ ಎನಿಸಿಕೊಂಡಿರುವ ಇಂಗ್ಲೆಂಡ್ ಒಂದೇ ಒಂದು ಬಾರಿ ಪ್ರಶಸ್ತಿ ಗೆದ್ದಿಲ್ಲ. ಅತ್ತ ದ. ಆಫ್ರಿಕಾ ಕೂಡಾ ಎಷ್ಟೇ ಪ್ರಬಲ ತಂಡ ಎನಿಸಿಕೊಂಡರೂ ಇದುವರೆಗೆ ಸೆಮಿಫೈನಲ್ ದಾಟಲು ಸಾಧ್ಯವಾಗಿಲ್ಲ.
 
ಹೀಗಾಗಿ ಎರಡು ದುರಾದೃಷ್ಟ ತಂಡದ ನಡುವೆ ಇಂದು ಮೊದಲ ಹಣಾಹಣಿ ನಡೆಯಲಿದೆ. ಹಾಗೆ ನೋಡಿದರೆ ಈ ಬಾರಿ ತವರಿನ ಬಲವೂ ಪ್ರತಿಭಾವಂತಹ ಗಡಣವೂ ಹೊಂದಿರುವ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ.
 
ಇಂಗ್ಲೆಂಡ್ ತಂಡದಲ್ಲಿ ಜೋ ರೂಟ್, ಬೇರ್ ಸ್ಟೋ, ಬೆನ್ ಸ್ಟೋಕ್ಸ್, ಆದಿಲ್ ರಶೀದ್ ಮುಂತಾದ ಆಟಗಾರರು ಪ್ರಮುಖ ಶಕ್ತಿಯಾಗಿದ್ದಾರೆ. ದ.ಆಫ್ರಿಕಾಗೆ ಫಾ ಡು ಪ್ಲೆಸಿಸ್, ಕ್ವಿಂಟನ್ ಡಿ ಕಾಕ್, ಕಗಿಸೊ ರಬಾಡ, ಡೇವಿಡ್ ಮಿಲ್ಲರ್, ಇಮ್ರಾನ್ ತಾಹಿರ್ ಬಲವಿದೆ. ಈ ಮದಗಜಗಳ ಹೋರಾಟದಲ್ಲಿ ಜಯ ಯಾರಿಗೆ ಕಾದು ನೋಡಬೇಕಿದೆ.
 
ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರವಿರಲಿದೆ.
ಇದರಲ್ಲಿ ಇನ್ನಷ್ಟು ಓದಿ :