Photo Courtesy: Twitterಮುಂಬೈ: ಐಸಿಸಿ ಏಕದಿನ ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.ಟೀಂ ಇಂಡಿಯಾಗೆ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಾಗಿರುವುದರಿಂದ ಪ್ರತಿಷ್ಠೆಯ ಕಣವಾಗಿದೆ. ಜೊತೆಗೆ ಇದುವರೆಗೆ ನಡೆದ ಲೀಗ್ ಪಂದ್ಯಗಳಲ್ಲಿ ಸೋಲರಿಯದೇ ಬಂದಿದ್ದ ಭಾರತಕ್ಕೆ ಇನ್ನೆರಡು ಪಂದ್ಯಗಳಲ್ಲಿ ಗೆಲ್ಲುವ ಒತ್ತಡವಿದೆ. ಇದುವರೆಗೆ ನಡೆದ ವಿಶ್ವಕಪ್ ಗಳಲ್ಲಿ ಟೀಂ ಇಂಡಿಯಾ ಹಲವು ಬಾರಿ ಸೆಮಿಫೈನಲ್ ಹಂತದಲ್ಲಿ ಮುಗ್ಗರಿಸಿದ್ದು ಇದೆ.