Widgets Magazine

ಭಾರತದ ವಿರುದ್ಧ ಪಾಕ್ ಸೋಲೋದಿಕ್ಕೆ ಕಾರಣ ಬರ್ಗರ್ ಅಂತೆ!

ಲಂಡನ್| Krishnaveni K| Last Modified ಮಂಗಳವಾರ, 18 ಜೂನ್ 2019 (09:25 IST)
ಲಂಡನ್: ವಿಶ್ವಕಪ್ ಕೂಟದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಮತ್ತೊಂದು ದಿಗ್ವಿಜಯ ಸಾಧಿಸಿದೆ. ಸಾಂಪ್ರದಾಯಿಕ ಎದುರಾಳಿ ವಿರುದ್ಧ ಸೋತಿದ್ದಕ್ಕೆ ಪಾಕ್ ತಂಡ ಈಗ ಅಭಿಮಾನಿಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.
 

ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ರನ್ನು ಮಾಜಿ ವೇಗಿ ಶೊಯೇಬ್ ಅಖ್ತರ್ ಬ್ರೈನ್ ಲೆಸ್ ನಾಯಕ ಎಂದು ಜರೆದಿದ್ದಾರೆ. ಇನ್ನು, ಪಾಕ್ ಅಭಿಮಾನಿಗಳು ಕಳಪೆ ಫೀಲ್ಡಿಂಗ್, ಸ್ವಲ್ಪವೂ ಉತ್ಸಾಹವೇ ಇಲ್ಲದ ಆಡಿದ ಕ್ರಿಕೆಟಿಗರು ಫಿಟ್ನೆಸ್ ಬಗ್ಗೆ ಧ್ಯಾನ ನೀಡದ್ದಕ್ಕೆ ಸೋಲಾಯಿತು ಎಂದಿದ್ದಾರೆ.
 
ವಿಶೇಷವೆಂದರೆ ಪಾಕ್ ಕ್ರಿಕೆಟಿಗರ ಆಹಾರ ಅಭ್ಯಾಸದ ಬಗ್ಗೆ ಅಭಿಮಾನಿಗಳು ಟೀಕಾಪ್ರಹಾರ ನಡೆಸಿದ್ದಾರೆ. ಭಾರತದ ವಿರುದ್ಧದ ಪಂದ್ಯಕ್ಕೆ ಮೊದಲು ಪಾಕ್ ಕ್ರಿಕೆಟಿಗರು ಬರ್ಗರ್ ಸೇವಿಸುತ್ತಿರುವ ಫೋಟೋ, ವಿಡಿಯೋಗಳನ್ನು ಅಪ್ ಲೋಡ್ ಮಾಡಿರುವ ಅಭಿಮಾನಿಗಳು ಇವರಿಗೆ ಫಿಟ್ ನೆಸ್ ಇಲ್ಲ ಏನೂ ಇಲ್ಲ, ಇದಕ್ಕೇ ಸೋತರು ಎಂದು ಛೀಮಾರಿ ಹಾಕಿದ್ದಾರೆ.
 
31 ವರ್ಷಗಳ ಹಿಂದೆ ಇಮ್ರಾನ್ ಖಾನ್ ಇವರಿಗಿಂತ ಮುಂದಾಲೋಚನೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಇಮ್ರಾನ್ ತಮ್ಮ ತಂಡದ ಕ್ರಿಕೆಟಿಗರಿಗೆ ವಿಶ್ವಕಪ್ ನಂತಹ ದೊಡ್ಡ ಕೂಟದ ಸಂದರ್ಭದಲ್ಲಿ ಬರ್ಗರ್ ಸೇವಿಸಲು ಬಿಡುತ್ತಿರಲಿಲ್ಲ. ಆದರೆ ಈಗ ಸ್ವತಃ ಸರ್ಫರಾಜ್ ಬರ್ಗರ್ ಸೇವಿಸುತ್ತಾ ಫಿಟ್ ನೆಸ್ ಮರೆತು ಕೂತಿದ್ದಾರೆ ಎಂದು ಅಭಿಮಾನಿಗಳು ಟೀಕಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :