ಪದೇ ಪದೇ ಪಿಚ್ ನಡುವೆ ಓಡಿ ಅಂಪಾಯರ್ ಗಳಿಂದ ವಾರ್ನಿಂಗ್ ಪಡೆದ ಪಾಕ್

ಲಂಡನ್, ಸೋಮವಾರ, 17 ಜೂನ್ 2019 (08:42 IST)

ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕ್ ವೇಗಿಗಳು ಪದೇ ಪದೇ ಪಿಚ್ ಮೇಲೆ ನಡೆದು ಅಂಪಾಯರ್ ಬಳಿ ಪದೇ ಪದೇ ಎಚ್ಚರಿಕೆ ಪಡೆದ ಘಟನೆ ನಡೆದಿದೆ.


 
ವೇಗಿ ಮೊಹಮ್ಮದ್ ಅಮೀರ್ ಮೊದಲು ಎಚ್ಚರಿಕೆ ಪಡೆದವರು. ಪಿಚ್ ಮೇಲೆ ಓಡಾಡಿದ್ದಕ್ಕೆ ಅಮೀರ್ ಎರಡು ಬಾರಿ ವಾರ್ನಿಂಗ್ ಪಡೆದರು. ನಂತರ ಮತ್ತೊಬ್ಬ ವೇಗಿ ವಹಾಬ್ ರಿಯಾಜ್ ಕೂಡಾ ಎರಡು ಬಾರಿ ಅಂಪಾಯರ್ ಬಳಿ ಇದೇ ಕಾರಣಕ್ಕೆ ವಾರ್ನಿಂಗ್ ಪಡೆದರು.
 
ಇಷ್ಟರಲ್ಲಿ ಪಾಕ್ ನಾಯಕ ಸರ್ಫರಾಜ್ ತಾಳ್ಮೆ ಕಟ್ಟೆಯೊಡೆದಿತ್ತು. ತಮ್ಮ ಬೌಲರ್ ಗಳಿಗೆ ಕೊಂಚ ಗರಂ ಆಗಿಯೇ ಪಾಕ್ ನಾಯಕ ತಿಳಿ ಹೇಳಿದರು. ವಿಶೇಷವೆಂದರೆ ಹೀಗೆ ಅಂಪಾಯರ್ ಬಳಿ ಎಚ್ಚರಿಕೆ ಪಡೆದ ಮರು ಎಸೆತದಲ್ಲಿಯೇ ವಹಾಬ್ ಕೆಎಲ್ ರಾಹುಲ್ ರೂಪದಲ್ಲಿ ಪಾಕ್ ಗೆ ಮೊದಲ ವಿಕೆಟ್ ಗಳಿಸಿಕೊಟ್ಟರು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಮಳೆಯನ್ನೂ ಸೋಲಿಸಿದ ಟೀಂ ಇಂಡಿಯಾ

ಲಂಡನ್: ನಿರೀಕ್ಷೆಯಂತೆಯೇ ವಿಶ್ವಕಪ್ 2019 ರ ನಿನ್ನೆಯ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಟೀಂ ...

news

ವಿಶ್ವಕಪ್ ಕ್ರಿಕೆಟ್ 2019: ಪಾಕ್ ಪೇಲವ ಬೌಲಿಂಗ್ ಎದುರು ರೋಹಿತ್ ಶರ್ಮಾ ಬ್ಯಾಟಿಂಗ್ ದೃಶ್ಯ ಕಾವ್ಯ

ಲಂಡನ್: ಪಾಕಿಸ್ತಾನ ವಿರುದ್ಧ ವಿಶ್ವಕಪ್ ಆಡುವಾಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಚಿನ್ ತೆಂಡುಲ್ಕರ್ ...

news

ವಿಶ್ವಕಪ್ 2019: ಟಾಸ್ ಸೋತ ಟೀಂ ಇಂಡಿಯಾದಲ್ಲಿ ಯಾರು ಇನ್? ಯಾರು ಔಟ್?

ಲಂಡನ್: ಪಾಕಿಸ್ತಾನ ವಿರುದ್ಧ ಇಂದು ನಡೆಯುತ್ತಿರುವ ವಿಶ್ವಕಪ್ 2019 ರ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ...

news

ಭಾರತ-ಪಾಕ್ ಮ್ಯಾಚ್ ನೋಡಲು ಲಂಡನ್ ತಲುಪಿದ ಸಾನಿಯಾ ಮಿರ್ಜಾ

ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ನಡೆಯಲಿರುವ ವಿಶ್ವಕಪ್ ಕೂಟದ ಮಹತ್ವದ ಪಂದ್ಯ ವೀಕ್ಷಿಸಲು ...