Widgets Magazine

ರೋಹಿತ್ ಶರ್ಮಾರನ್ನು ರನೌಟ್ ಮಾಡುವ ಅವಕಾಶ ಕೈ ಚೆಲ್ಲಿ ಟ್ರೋಲ್ ಗೊಳಗಾದ ಪಾಕ್

ಲಂಡನ್| Krishnaveni K| Last Modified ಸೋಮವಾರ, 17 ಜೂನ್ 2019 (08:51 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾರನ್ನು ಎರಡೆರಡು ರನೌಟ್ ಮಾಡಲು ವಿಫಲವಾದ ಪಾಕ್ ಕ್ರಿಕೆಟ್ ತಂಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದೆ.

 
ಪಂದ್ಯದ ಏಳನೇ ಓವರ್ ನಲ್ಲಿ ರಾಹುಲ್ ಮತ್ತು ರೋಹಿತ್ ನಡುವೆ ತಾಳ ಮೇಳ ತಪ್ಪಿ ರೋಹಿತ್ ಸುಲಭವಾಗಿ ರನೌಟ್ ಆಗುತ್ತಿದ್ದರು. ಆದರೆ ಈ ವೇಳೆ ಪಾಕ್ ಫೀಲ್ಡರ್ ಗಳು ಮಾಡಿದ ಮೂರ್ಖತನದಿಂದ ರೋಹಿತ್ ಬಚಾವ್ ಆದರು.
 
ಪಾಕ್ ಬೌಲರ್ ಗಳು ಅಮೃತಸರಕ್ಕೆ ಹೊಡೆಯಬೇಕಿತ್ತು. ಆದರೆ ಲಾಹೋರ್ ಗೆ ಹೊಡೆದರು ಎಂದು ಲೇವಡಿ ಮಾಡಿರುವ ಟ್ವಿಟರಿಗರು ಹಲವು ಮೆಮೆಗಳ ಮೂಲಕವೂ ಪಾಕ್ ತಂಡವನ್ನು ಕಾಲೆಳೆದಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :