ಹೀನಾಯವಾಗಿ ಸೋತಿದ್ದಕ್ಕೆ ಪಾಕ್ ಕ್ರಿಕೆಟ್ ತಂಡವನ್ನು ಹೀಗೆಲ್ಲಾ ಕಾಲೆಳೆಯೋದಾ?!

ಲಂಡನ್, ಶನಿವಾರ, 1 ಜೂನ್ 2019 (09:32 IST)

ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯವಾಗಿ 7 ವಿಕೆಟ್ ಗಳಿಂದ ಸೋಲನುಭವಿಸಿ ಅಭಿಮಾನಿಗಳಿಂದ ಟ್ರೋಲ್ ಗೊಳಗಾಗಿದೆ.


 
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಕೇವಲ 21.4 ಓವರ್ ಗಳಲ್ಲಿ 105 ರನ್ ಗಳಿಗೆ ಆಲೌಟ್ ಆಗಿತ್ತು. ಇದು ಪಾಕ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಚುಟುಕು ಅವಧಿಯ ಇನಿಂಗ್ಸ್ ಆಗಿತ್ತು. ಕೇವಲ 111 ನಿಮಿಷಗಳಲ್ಲಿ ಪಾಕ್ ಇನಿಂಗ್ಸ್ ಕೊನೆಗೊಂಡಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ 13.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿ ಗೆಲುವಿನ ನಗೆ ಬೀರಿತು.
 
ಈ ಹೀನಾಯ ಸೋಲಿನ ಬಳಿಕ ಟ್ವಿಟರ್ ನಲ್ಲಿ ಅಭಿಮಾನಿಗಳು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಮೈದಾನ ತಲುಪಲೂ ಇದಕ್ಕಿಂತ ಹೆಚ್ಚು ಸಮಯ ಬೇಕಾಗಿತ್ತು ಎಂದು ಕೆಲವರು ಕಾಲೆಳೆದರೆ ಇನ್ನು ಕೆಲವರು ಮಳೆಯಾದರೂ ಬರಬಾರದಿತ್ತೇ ಎಂದಿದ್ದಾರೆ. ಇನ್ನು ಕೆಲವರು ಇದು ಟಿ20 ಕ್ರಿಕೆಟ್ ಅಲ್ಲ ಎಂದು ತಮ್ಮ ಕ್ರಿಕೆಟಿಗರಿಗೆ ನೆನಪಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮೊದಲ ಪಂದ್ಯದಲ್ಲೇ ಇತಿಹಾಸ ಬರೆದ ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್

ದಿ ಓವಲ್: ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ದ.ಆಫ್ರಿಕಾ ಬೌಲರ್ ...

news

ವಿಶ್ವಕಪ್ ಕ್ರಿಕೆಟ್ 2019: ಮೊದಲ ಪಂದ್ಯದಲ್ಲೇ ಗಮನ ಸೆಳೆದ ಬೆನ್ ಸ್ಟೋಕ್ಸ್ ಶೋ

ದಿ ಓವಲ್: ವಿಶ್ವಕಪ್ ಕ್ರಿಕೆಟ್ 2019 ರ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ದ.ಆಫ್ರಿಕಾ ವಿರುದ್ಧ ...

news

ವಿಶ್ವಕಪ್ ಮೂಲಕ ಮತ್ತೊಂದು ಇನಿಂಗ್ಸ್ ಶುರು ಮಾಡಿದ ಸಚಿನ್ ತೆಂಡುಲ್ಕರ್!

ಲಂಡನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಲೋಕದಲ್ಲಿ ಎಂತೆಂಥದ್ದೋ ದಾಖಲೆ ಮಾಡಿ ಕ್ರಿಕೆಟ್ ...

news

ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ಬೆಸ್ಟ್ ಆಫ್ ಲಕ್ ಹೇಳಲು ತಯಾರಾಗಿದೆ 20 ಕೆಜಿ ಕೇಕ್!

ನವದೆಹಲಿ: ಇಂಗ್ಲೆಂಡ್ ನಲ್ಲಿ ನಿನ್ನೆಯಿಂದ ಆರಂಭವಾಗಿರುವ ವಿಶ್ವಕಪ್ 2019 ಕ್ಕೆ ಚಾಲನೆ ದೊರೆತಿದೆ. ...