ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಆಗಾಗ ಎಡವಟ್ಟಿನ ಕಾರಣಕ್ಕೆ ಸುದ್ದಿಯಾಗುವುದು ಮಾಮೂಲು. ಈಗ ಕ್ರಿಕೆಟಿಗರ ಕೊರೋನಾ ಪರೀಕ್ಷೆ ವಿಚಾರದಲ್ಲೂ ಹಾಗೆಯೇ ಆಗಿದೆ. ಇಂಗ್ಲೆಂಡ್ ಗೆ ತೆರಳಬೇಕಿದ್ದ ಪಾಕ್ ಕ್ರಿಕೆಟಿಗರನ್ನು ಕೊರೋನಾ ಪರೀಕ್ಷೆಗೊಳಪಡಿಸಿದಾಗ 10 ಮಂದಿಗೆ ಕೊರೋನಾ ತಗುಲಿರುವುದು ಪತ್ತೆಯಾಗಿತ್ತು. ಆದರೆ ಇದಾದ ಮರು ದಿನವೇ ಈ ಪೈಕಿ ಮೊಹಮ್ಮದ್ ಹಫೀಜ್ ತನ್ನ ಪರೀಕ್ಷೆ ನೆಗೆಟಿವ್ ಬಂದಿದೆ ಎಂದಿದ್ದರು.ಇದೀಗ ಮತ್ತೆ ಇಲ್ಲ..ಇಲ್ಲ.. ಹಫೀಜ್ ಗೆ ಕೊರೋನಾ ಇದೆ ಎನ್ನುತ್ತಿದೆ ಪಾಕ್ ಮಂಡಳಿ. ಈ