ಏಷ್ಯಾ ಇಲೆವೆನ್ ತಂಡದಿಂದ ಪಾಕ್ ಕ್ರಿಕೆಟಿಗರನ್ನು ಮೂಲೆಗುಂಪು ಮಾಡಿದ ಬಿಸಿಸಿಐ

ಮುಂಬೈ| Krishnaveni K| Last Modified ಶುಕ್ರವಾರ, 27 ಡಿಸೆಂಬರ್ 2019 (09:09 IST)
ಮುಂಬೈ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆಯೋಜಿಸಲಿರುವ ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ನಡುವಿನ ಎರಡು ಟಿ20 ಪಂದ್ಯಗಳಲ್ಲಿ ಯಾವುದೇ ಪಾಕ್ ಆಟಗಾರನೂ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

 
ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬರ್ ಅವರ ಜನ್ಮ ಜಯಂತಿ ಪ್ರಯುಕ್ತ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಾರ್ಚ್ ನಲ್ಲಿ ವಿಶ್ವ ಇಲೆವೆನ್ ಮತ್ತು ಏಷ್ಯಾ ಇಲೆವೆನ್ ನಡುವೆ ಎರಡು ಟಿ20 ಪಂದ್ಯ ಆಯೋಜಿಸುತ್ತಿದೆ. ಈ ಪಂದ್ಯಕ್ಕೆ ಐಸಿಸಿ ಕೂಡಾ ಮಾನ್ಯತೆ ನೀಡಿದೆ.
 
ಆದರೆ ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಹಳಸಿರುವುದರಿಂದ ಏಷ್ಯಾ ಇಲೆವೆನ್ ತಂಡದಲ್ಲಿ ಯಾವುದೇ ಪಾಕ್ ಆಟಗಾರನಿಗೂ ಆಹ್ವಾನ ನೀಡದಂತೆ ಮಾಡಲು ಭಾರತ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ. ಇನ್ನು ಏಷ್ಯಾ ಇಲೆವೆನ್ ನಲ್ಲಿ ಐವರು ಭಾರತೀಯ ಆಟಗಾರರು ಸ್ಥಾನ ಪಡೆಯಲಿದ್ದು, ಅವರು ಯಾರೆಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದರಲ್ಲಿ ಇನ್ನಷ್ಟು ಓದಿ :