Widgets Magazine

ಆಕಳಿಸುವ ನಾಯಕ ಸರ್ಫರಾಜ್ ಅಹಮ್ಮದ್ ಗೆ ಗೇಟ್ ಪಾಸ್ ನೀಡಿದ ಪಾಕಿಸ್ತಾನ

ಇಸ್ಲಾಮಾಬಾದ್| Krishnaveni K| Last Modified ಶನಿವಾರ, 19 ಅಕ್ಟೋಬರ್ 2019 (08:44 IST)
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿ ಫಿಟ್ ನೆಸ್ ಬಗ್ಗೆ ಸಾಕಷ್ಟು ಟೀಕೆಗೊಳಗಾಗಿದ್ದ ಸರ್ಫರಾಜ್ ಅಹಮ್ಮದ್ ಗೆ ಪಿಸಿಬಿ ಗೇಟ್ ಪಾಸ್ ನೀಡಿದೆ.

 
ಸರ್ಫರಾಜ್ ಹಿಂದೆ ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋತ ಬಳಿಕ ಹಿಗ್ಗಾಮುಗ್ಗಾ ಟೀಕೆಗೊಳಗಾಗಿದ್ದರು. ಅದರಲ್ಲೂ ಅವರು ಮೈದಾನದಲ್ಲೇ ಆಕಳಿಸಿದ್ದು ಭಾರೀ ಸುದ್ದಿಯಾಗಿತ್ತು. ಇದಾದ ಬಳಿಕ ಇತ್ತೀಚೆಗೆ ಶ್ರೀಲಂಕಾ ವಿರುದ್ಧವೂ ಪಾಕ್ ಸೋಲೊಪ್ಪಿತ್ತು.
 
ಇದಾದ ಬಳಿಕ ಸರ್ಫರಾಜ್ ರನ್ನು ನಾಯಕತ್ವದಿಂದ ಕಿತ್ತೊಗೆಯಲು ಒತ್ತಡ ಹೆಚ್ಚಿತ್ತು. ಹೀಗಾಗಿ ಫಾರ್ಮ್ ಕೊರತೆ ಮತ್ತು ವೈಫಲ್ಯದ ಕಾರಣ ನೀಡಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅವರ ಬದಲು ಟೆಸ್ಟ್ ಪಂದ್ಯಕ್ಕೆ ಅಝರ್ ಅಲಿ ಮತ್ತು ಟಿ20 ತಂಡಕ್ಕೆ ಬಾಬರ್ ಅಜಮ್ ರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿ ನೇಮಕ ಮಾಡಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :