ಅಬುದಾಬಿ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಬೃಹತ್ ಮುನ್ನಡೆ ಗಳಿಸಿದ್ದುಗೆಲುವಿನತ್ತ ದಾಪುಗಾಲಿಟ್ಟಿದೆ.ನಾಲ್ಕನೇ ದಿನವಾದ ಇಂದು ಇತ್ತೀಚೆಗಿನ ವರದಿ ಬಂದಾಗ ಪಾಕಿಸ್ತಾನ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿದೆ. ಯೂನಿಸ್ ಖಾನ್ ಮತ್ತು ಅಸದ್ ಶಫೀಕ್ ಕ್ರೀಸ್ ನಲ್ಲಿದ್ದಾರೆ. ಪಾಕ್ ಮೊದಲ ಇನಿಂಗ್ಸ್ ನಲ್ಲಿ452 ರನ್ ಪೇರಿಸಿತ್ತು.ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ಕೇವಲ 224 ರನ್ ಗಳಿಗೆ ಆಲೌಟ್ ಆಗಿತ್ತು.