ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಚ್ಯಾಟ್ ಶೋ ವೇಳೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ರದ್ದುಗೊಳಿಸಲಾಗಿದೆ ಎಂದು ಘೋಷಣೆ ಮಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ಈ ಬಾರಿಯ ಏಷ್ಯಾ ಕಪ್ ಆಯೋಜಕರಾಗಿರುವ ಪಾಕ್ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದೆ.ಏಷ್ಯಾ ಕಪ್ ರದ್ದು ಮಾಡಬೇಕೋ ಬೇಡವೋ ಎಂದು ನಿರ್ಧರಿಸುವುದು ಏಷ್ಯಾ ಕ್ರಿಕೆಟ್ ಮಂಡಳಿ. ಅದರ ಸಭೆ ಇನ್ನೂ ನಡೆದಿಲ್ಲ. ಅದನ್ನು ಘೋಷಣೆ ಮಾಡುವುದು ಏಷ್ಯಾ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್.