ದುಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಡಕ್ ನಿಲುವಿನಿಂದಾಗಿ ಪಾಕಿಸ್ತಾನ ಇದೀಗ 2020 ರ ಏಷ್ಯಾ ಕಪ್ ಕ್ರಿಕೆಟ್ ಕೂಟವನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ನಿರ್ಧರಿಸಿದೆ.ಯಾವುದೇ ಕಾರಣಕ್ಕೂ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲ್ಲ ಎಂದು ಗಂಗೂಲಿ ಹಠ ಹಿಡಿದಿದ್ದರಿಂದ ಒತ್ತಡಕ್ಕೆ ಮಣಿದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಹ್ಸಾನ್ ಮಣಿ ಇದೀಗ ಪಾಕಿಸ್ತಾನದ ಹೊರಗೆ ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜಿಸುವುದಾಗಿ ಹೇಳಿದ್ದಾರೆ.ಅದರಂತೆ ಪಾಕ್ ದುಬೈನಲ್ಲಿ ಏಷ್ಯಾ ಕಪ್ ಆಯೋಜಿಸುವ ಸಾಧ್ಯತೆಯಿದೆ.