ದುಬೈ: ಆಸ್ಟ್ರೇಲಿಯಾ ವಿರುದ್ಧ ರಾಂಚಿ ಏಕದಿನ ಪಂದ್ಯದಲ್ಲಿ ಆರ್ಮಿ ಕ್ಯಾಪ್ ಧರಿಸಿ ಆಡಲು ಐಸಿಸಿಯೇ ಟೀಂ ಇಂಡಿಯಾಗೆ ಒಪ್ಪಿಗೆ ನೀಡಿತ್ತು ಎಂದು ಸ್ಪಷ್ಟನೆ ನೀಡಿದರೂ ಪಾಕಿಸ್ತಾನಕ್ಕೆ ತೃಪ್ತಿಯಾಗಿಲ್ಲ.ಪಾಕ್ ವಿದೇಶಾಂಗ ಸಚಿವರು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಟೀಂ ಇಂಡಿಯಾ ಆಟಗಾರರು ಮಿಲಿಟರಿ ಕ್ಯಾಪ್ ಧರಿಸಿ ಆಡುವ ಮೂಲಕ ಕ್ರೀಡೆಯಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಟ್ವಿಟರ್ ಮೂಲಕ ಆರೋಪಿಸಿದ್ದರು.ಪಾಕ್ ಸಚಿವರ ಆರೋಪದ ಬಳಿಕ ಐಸಿಸಿ, ಹುತಾತ್ಮ ಯೋಧರಿಗೆ ನೆರವಾಗುವ ದೃಷ್ಟಿಯಿಂದ ಕ್ಯಾಪ್