ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಸೋತ ಮೇಲೆ ದ್ವಿತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ತಿರುಗೇಟು ಕೊಡುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಲೇ ಇದ್ದರು. ಆದರೆ ವರುಣ ಅದಕ್ಕೆ ತಣ್ಣೀರೆರಚಿದ.ಮೊದಲ ದಿನದಾಟ ಕ್ರಿಕೆಟಿಗರು ಊಟ-ತಿಂಡಿ ನಡುವೆಯೇ ಕಳೆದುಹೋಯ್ತು. ಆಗಾಗ ಅಂಪಾಯರ್ ಗಳು ಮೈದಾನಕ್ಕಿಳಿದು ಆಕಾಶ ನೋಡುವುದರಲ್ಲೇ ಕಳೆಯಿತು. ಮಧ್ಯಾಹ್ನದ ನಂತರ ಮಳೆ ನಿಂತರೂ ಮತ್ತೆ ಸುರಿದು ಪಂದ್ಯ ನಡೆಯುವ ಅವಕಾಶವೇ ಇಲ್ಲವಾಯಿತು. ಕ್ರಿಕೆಟಿಗರು ಆಗಾಗ ಲಂಚ್, ಟೀ