ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ತೃತೀಯ ಟೆಸ್ಟ್ ಪಂದ್ಯ ನಡೆಯುತ್ತಿರುವ ಜೊಹಾನ್ಸ್ ಬರ್ಗ್ ನ ವಾಂಡರರ್ಸ್ ಪಿಚ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪಿಚ್ ಮೂರನೇ ದಿನಕ್ಕೆ ಸಂಪೂರ್ಣ ಹದಗೆಟ್ಟಿದ್ದು, ಬಿರುಕು ಅಗಲವಾಗುತ್ತಿದೆ. ಇದರಿಂದ ಬಾಲ್ ಅತಿಯಾಗಿ ಬೌನ್ಸ್ ಆಗುತ್ತಿದ್ದು, ಆಗಾಗ ಭಾರತೀಯ ಬ್ಯಾಟ್ಸ್ ಮನ್ ಗಳ ಗ್ಲೌಸ್ ಗೆ ಬಡಿಯುತ್ತಿತ್ತು. ಇದರಿಂದ ಕ್ರಿಕೆಟಿಗರು ನೋವು ಅನುಭವಿಸುವಂತಾಯಿತು.ಈ ಪಿಚ್ ನ ಸ್ಥಿತಿ ನೋಡಿ ಮಾಜಿ ಕ್ರಿಕೆಟಿಗರು,