ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 6 ರಿಂದ ಅಡಿಲೇಡ್ ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಪೃಥ್ವಿ ಶಾ ಔಟ್ ಆಗಿದ್ದಾರೆ.ಅಭ್ಯಾಸ ಪಂದ್ಯದಲ್ಲಿ ಮೊಣಕಾಲು ಉಳುಕಿಸಿಕೊಂಡಿದ್ದ ಪೃಥ್ವಿ ಶಾರನ್ನು ಮೈದಾನದಿಂದ ಎತ್ತಿಕೊಂಡು ಪೆವಿಲಿಯನ್ ಗೆ ಕರೆದೊಯ್ಯಬೇಕಾಯಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ವೈದ್ಯಕೀಯ ತಂಡ ಸ್ಕ್ಯಾನಿಂಗ್ ನಡೆಸಿ ಗಾಯದ ಗಂಭೀರತೆ ಪರೀಕ್ಷೆ ನಡೆಸಿತ್ತು.ಇದೀಗ ಅವರ ಗಾಯ ಗಂಭೀರವಾಗಿದ್ದು ಮೊದಲ ಟೆಸ್ಟ್ ನಿಂದ ಹೊರಗುಳಿಯಲಿದ್ದಾರೆ. ಅಭ್ಯಾಸ