ಸಿಡ್ನಿ: ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಸರಣಿಗೂ ಮೊದಲೇ ಪೃಥ್ವಿ ಶಾ ರೂಪದಲ್ಲಿ ಶಾಕ್ ಸಿಕ್ಕಿದೆ. ಈ ಸರಣಿಯಲ್ಲಿ ಪೃಥ್ವಿ ಶಾ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡು ಆತಂಕ ಮೂಡಿಸಿದ್ದಾರೆ.ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಂಡರಿ ಲೈನ್ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಪಡುವಾಗ ಕಾಲು ಉಳುಕಿಸಿಕೊಂಡ ಪೃಥ್ವಿ ಶಾರನ್ನು ಸಹಾಯಕ ಸಿಬ್ಬಂದಿಗಳು ಹೊತ್ತು ಪೆವಿಯಲಿನ್ ಗೆ ಕರೆದೊಯ್ದಿದ್ದಾರೆ.ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರೀ ಭರವಸೆ ಮೂಡಿಸಿದ್ದ