ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ ಗೆ ತೆರಳಿರುವ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಕ್ವಾರಂಟೈನ್ ಅವಧಿ ಮುಗಿಸಿ ತಂಡ ಕೂಡಿಕೊಂಡಿದ್ದಾರೆ.ಇಬ್ಬರೂ ಆಟಗಾರರು ಲಾರ್ಡ್ಸ್ ಕ್ರೀಡಾಂಗಣದಲ್ಲಿ ತಂಡದ ಇತರ ಆಟಗಾರರ ಜೊತೆ ಸೇರಿಕೊಂಡಿದ್ದಾರೆ. ಹೀಗಾಗಿ ಇಬ್ಬರೂ ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ತಂಡಕ್ಕೆ ಲಭ್ಯರಿರಲಿದ್ದಾರೆ.ಮೂಲಗಳ ಪ್ರಕಾರ ಫಾರ್ಮ್ ನಲ್ಲಿಲ್ಲದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರೆಹಾನೆ ಬದಲಿಗೆ ಈ ಇಬ್ಬರಿಗೆ ಸ್ಥಾನ