ಕೃನಾಲ್ ಪಾಂಡ್ಯ ಕೊರೋನಾದಿಂದ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಗೆ ದುರಾದೃಷ್ಟ

ಕೊಲೊಂಬೋ| Krishnaveni K| Last Modified ಬುಧವಾರ, 28 ಜುಲೈ 2021 (08:50 IST)
ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೊರೋನಾ ಕಾಣಿಸಿಕೊಂಡಿರುವುದರಿಂದ ನಷ್ಟವಾಗಿರುವುದು ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಗೆ! ಅದು ಹೇಗೆ ಅಂತೀರಾ?

 
ಇಬ್ಬರೂ ಲಂಕಾ ಸರಣಿ ಮುಗಿದ ತಕ್ಷಣ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬೇಕಿತ್ತು. ಆದರೆ ಈಗ ಕೃನಾಲ್ ಜೊತೆಗಿದ್ದ ಕಾರಣಕ್ಕೆ ತಂಡದ ಇತರ ಸದಸ್ಯರ ಜೊತೆಗೆ ಇವರೂ ಕಡ್ಡಾಯವಾಗಿ ಕ್ವಾರಂಟೈನ್ ಗೊಳಗಾಗಬೇಕಿದೆ. ಅಲ್ಲದೆ, ಕೃನಾಲ್ ಜೊತೆಗೆ ಇವರಿಬ್ಬರೂ ಮೊದಲ ಟಿ20 ಪಂದ್ಯವಾಡಿದ್ದರು.
 
ಇದರಿಂದಾಗಿ ಸದ್ಯಕ್ಕಂತೂ ಇವರಿಗೆ ಇಂಗ್ಲೆಂಡ್ ವಿಮಾನವೇರಲು ಸಾಧ‍್ಯವಿಲ್ಲ. ಇದರಿಂದಾಗಿ ಕೃನಾಲ್ ಗೆ ಕೊರೋನಾ ಬಂದಿದ್ದರಿಂದ ಈ ಇಬ್ಬರೂ ಆಟಗಾರರಿಗೆ ತಕ್ಷಣವೇ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೆಸ್ಟ್ ಸರಣಿಯ ಭಾಗವಾಗಲು ಸಾಧ‍್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :